ಶಾಸಕ ಸಿಮೆಂಟ್ ಮಂಜು ಸಹಪಾಠಿ ಹೃದಯಘಾತದಿಂದ ಸಾವು

ಶಾಸಕ ಸಿಮೆಂಟ್ ಮಂಜು ಸಹಪಾಠಿ ಹೃದಯಘಾತದಿಂದ ಸಾವು ಸಕಲೇಶಪುರ : ಪಟ್ಟಣದ ಕೆ. ಎಸ್. ಆರ್. ಟಿ. ಸಿ ಡಿಪೋದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೇಶವಮೂರ್ತಿ (45) ಹೃದಯಘಾತದಿಂದ ಸಾವನ್ನಪ್ಪಿದ್ದಾರೆ. ಶಾಸಕ ಸಿಮೆಂಟ್ ಮಂಜುರವರ ಶಾಲಾ ದಿನಗಳ ಸಹಪಾಠಿಯಾಗಿದ್ದ ಇವರು ಕ್ರಿಕೆಟ್ ಸೇರಿದಂತೆ ವಿವಿಧ ಆಟಗಳಲ್ಲಿ ಕ್ರೀಡಾಪಟುವಾಗಿ ಹೆಸರು ಪಡೆದಿದ್ದರು. ಇತ್ತೀಚೆಗಷ್ಟ್ಟೇ ಡಿಪೋದಲ್ಲಿ ಅಂಬೇಡ್ಕರ್ ಜಯಂತಿಯನ್ನು ಅದ್ದೂರಿಯಾಗಿ ನಡೆಸಲು ಪ್ರಮುಖ ಪಾತ್ರ ವಹಿಸಿದ್ದರು. ಮೃತರ ಸಾವಿಗೆ ಶಾಸಕ ಸಿಮೆಂಟ್ ಮಂಜು, ಬಿಜೆಪಿ ಮುಖಂಡರಾದ ಸುಧೀಶ್, ನೇಮಾನ್ ಶೇಕ್, ನವೀನ್ ಶೆಟ್ಟಿ, ಬೈರಮುಡಿ ಕೃತೀಶ್, ಮುಂತಾದವರು ಸಂತಾಪ ಸೂಚಿಸಿದ್ದಾರೆ.ಮೃತರ ಅಂತ್ಯ ಸಂಸ್ಕಾರ ಪಟ್ಟಣದ ಹಿಂದೂ ರುದ್ರ ಭೂಮಿಯಲ್ಲಿ ಇಂದು ಮಧ್ಯಾಹ್ನ ನಡೆಯಲಿದೆ

Leave a Reply

Your email address will not be published. Required fields are marked *

error: Content is protected !!